ಕನ್ನಡ ನುಡಿ ಹಬ್ಬ 2023

24 Nov 2023

ಪುಷ್ಕರಿಣಿಯಲ್ಲಿ ಕನ್ನಡೋತ್ಸವದ ಕಲರವ.
ನವೆಂಬರ್ 24ರಂದು ಮಾನಸರೋವರ ಪುಷ್ಕರಣಿ ವಿದ್ಯಾಶ್ರಮದ ಆವರಣದಲ್ಲಿ ಕನ್ನಡ ನುಡಿ ಹಬ್ಬವು ಸಂಭ್ರಮ ಸಡಗರದಿಂದ ನೆರವೇರಿತು.
ಮುಖ್ಯ ಅತಿಥಿಗಳಾದ ವತ್ಸಲಾ ಮೋಹನ್ , ಅತಿಥಿಗಳಾದ ಪ್ರತಿಭಾ ಗುರುರಾಜ್ ಅವರು ದೀಪ ಬೆಳಗಿಸಿ, ನಾಡ ಧ್ವಜಾರೋಹಣ ಮಾಡುವುದರ ಮೂಲಕ ಸಾವಿರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಕನ್ನಡ ನುಡಿ ಹಬ್ಬಕ್ಕೆ ಚಾಲನೆ ನೀಡಿದರು.
ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಸೀತಾರಾಮ್ ಸರ್ ,ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಶಿವಸ್ವಾಮಿ ರವರು, ಕಾರ್ಯದರ್ಶಿಗಳಾದ ಶ್ರೀಮತಿ ಸ್ವರೂಪಿಣಿ ಸಂದೇಶ ರವರು ,ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಹರ್ಷಿದಾ ಹರಿ ಕುಮಾರ್ ರವರು , ಉಪ ಪ್ರಾಂಶುಪಾಲರಾದ ಶ್ರೀಮತಿ ಸೂಝಿ ಪಿಂಟೊ ಮೇಡಂ ರವರು ಸೇರಿದಂತೆ ಎಲ್ಲ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು..
ವಿದ್ಯಾರ್ಥಿಗಳಿಂದ ಭಾಷಣ ಹಾಗೂ ಹಲವು ಸಾಂಸ್ಕೃತಿಕ ಕಲಾ ಪ್ರಕಾರಗಳು ಪ್ರಸ್ತುತಗೊಂಡವು. ಪ್ರಮುಖವಾಗಿ ಶಾಲೆಯ ನಾಲ್ಕು ತಂಡಗಳಾದ ನೀಲಗಿರಿ, ವಿಂಧ್ಯಾಚಲ ,ಹಿಮಾಚಲ, ಸಹ್ಯಾದ್ರಿ ತಂಡಗಳು ಕನ್ನಡ ನಾಡು-ನುಡಿಗೆ ಸಂಬಂಧಿಸಿದಂತೆ ನೃತ್ಯ ರೂಪಕಗಳ ಅಮೋಘ ಪ್ರದರ್ಶನವನ್ನು ನೀಡಿದರು. ಮುಖ್ಯ ಅತಿಥಿಗಳು ಹಿತವಚನದಲ್ಲಿ ಸೊಗಸಾಗಿ ಹಾಡುವುದರ ಮೂಲಕ ಮಕ್ಕಳಲ್ಲಿ ಕನ್ನಡದ ಕುರಿತಂತೆ ಅಭಿಮಾನ ಬೆಳೆಸಿಕೊಳ್ಳುವಂತೆ ಕರೆ ಕೊಟ್ಟರು.
ಕನ್ನಡ ನುಡಿ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ನಡೆದ ನಾನಾ ರೀತಿಯ ಕಲಾ ಪ್ರಕಾರದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕನ್ನಡವನ್ನು ಬಳಸಿ ಬೆಳೆಸೋಣ ಎಂಬ ಧ್ಯೇಯದಂತೆ ಪುಷ್ಕರಿಣಿಯು ಕನ್ನಡದ ಮೇಲಿನ ಅಭಿಮಾನವನ್ನು ಅರ್ಥಬದ್ಧವಾದ ಪಥದಲ್ಲಿ ಕನ್ನಡ ನುಡಿ ಹಬ್ಬವೆಂಬ ರಥವನ್ನು ಮೆರೆಸಿತು..